ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲೆ ಎಸಿಬಿ ದಾಳಿಯಾಗಿದೆ. ದಂಡು ರೈಲ್ವೆ ನಿಲ್ದಾಣದ ಬಳಿಯಿರುವ ಜಮೀರ್ ಮನೆ ಸೇರಿದಂತೆ ಏಕಕಾಲಕ್ಕೆ 5 ಕಡೆ ರೇಡ್ ಅಗಿದೆ. ಕೋಟ್ಯಾಂತರ ಜಮೀನು ಖರೀದಿ, 8 ಕೋಟಿ ಮೌಲ್ಯದ ಮನೆ ನಿರ್ಮಾಣದ ಬಗ್ಗೆ ಇಡಿ ತನಿಖೆ ನಡೆಸ್ತಿತ್ತು. ಆದಾಯ ಮೀರಿ ಆಸ್ತಿ ಗಳಿಕೆ, ಅಕ್ರಮ ಹಣಕಾಸು ವ್ಯವಹಾರ ಪ್ರಕರಣವನ್ನು ಇ.ಡಿ. ತನಿಖೆ ಮಾಡ್ತಿತ್ತು. ಕಳೆದ ಒಂದೂವರೆ ತಿಂಗಳ ಹಿಂದೆ ಎಸಿಬಿಗೆ ಇ.ಡಿ ವರದಿ ನೀಡಿತ್ತು. ಬೆಂಗಳೂರು ಜೊತೆಗೆ ಮುಂಬೈ, ದುಬೈ, ಶ್ರೀಲಂಕಾದಲ್ಲಿ ವ್ಯವಹಾರ, ಬಹುಕೋಟಿ ಐಎಂಎ ಕೇಸ್‍ನಲ್ಲಿ ಮನ್ಸೂರ್ ಅಲಿ ಖಾನ್ ಜೊತೆ ವ್ಯವಹಾರ ಸೇರಿದಂತೆ ಹಲವು ಆರೋಪಗಳು, ಆಯಾಮಗಳಲ್ಲಿ ತನಿಖೆ ನಡೀತಿದೆ.
#publictv #newscafe #hrranganath